
ನೋಂದಾಯಿಸಿಕೊಂಡವರ
ಸಂಖ್ಯೆ
56390
ಉದ್ಯೋಗ ಸೃಷ್ಟಿ
ರಿಜಿಸ್ಟ್ರೇಷನ್ ಫಾರ್ಮ್

ನಮ್ಮ ಬಗ್ಗೆ:
ಉದ್ಯೋಗ ಸೃಷ್ಟಿ ಅಭಿಯಾನವು ದೇಶದಲ್ಲಿ ಬದಲಾವಣೆ ತರಲು ಮತ್ತು ನಿರುದ್ಯೋಗಿ ಯುವಕರ ಸಮಸ್ಯೆಗಳಿಗೆ ಧ್ವನಿಗೂಡಿಸುವ ಉದ್ದೇಶದಿಂದ ಇಡುತ್ತಿರುವ ಮಹತ್ತರ ಹೆಜ್ಜೆಯಾಗಿದೆ. ದಶಕಗಳ ನಂತರ ನಮ್ಮ ದೇಶದ ನಿರುದ್ಯೋಗ ಪ್ರಮಾಣವು 50 ಮಿಲಿಯನ್‌ಗಿಂತಲೂ ಹೆಚ್ಚಾಗಿರುವುದು ಗಂಭೀರ ವಿಷಯವಾಗಿದೆ. ಹಾಗಾಗಿ ಇದು ನಾವೆಲ್ಲರೂ ಜನವಿರೋಧಿ ಸರ್ಕಾರದ ವಿರುದ್ಧ ಒಂದಾಗಿ ಧ್ವನಿ ಎತ್ತುವ ಸಮಯ. ಉದ್ಯೋಗ ಸೃಷ್ಟಿಯು ಸುಳ್ಳು ಭರವಸೆಗಳು ಹಾಗೂ ಜನರನ್ನು ಕಡೆಗಣಿಸುವ ಧೋರಣೆಯ ವಿರುದ್ಧ ನಮ್ಮ ಮಹತ್ವದ ಹೋರಾಟವಾಗಿದೆ.
ಈ ಪ್ರಮುಖ ಹೆಜ್ಜೆ ಭಾರತ್ ಜೋಡೋ ಯಾತ್ರೆಯ ಮೊದಲ ಭಾಗವಾಗಿದೆ. ಈ ಯಾತ್ರೆಯು ಸೆಪ್ಟೆಂಬರ್ 07 ರಂದು ಕನ್ಯಾಕುಮಾರಿಯಿಂದ ಆರಂಭವಾಗಿ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಕೊನೆಯ ಘಟ್ಟದಲ್ಲಿ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳುತ್ತದೆ. ಯಾತ್ರೆಯು ಒಟ್ಟು 150 ದಿನಗಳ ಅವಧಿಯಲ್ಲಿ ಸುಮಾರು 3,500 ಕಿ.ಮೀಗಳಷ್ಟು ದೂರವನ್ನು ಕ್ರಮಿಸಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಮೂಲಕ ಸುಮಾರು 21 ದಿನಗಳ ಕಾಲ ಕರ್ನಾಟಕದಲ್ಲಿ 511 ಕಿ.ಮೀ ಯಾತ್ರೆ ಜರುಗಲಿದೆ. ದೇಶದ ಯುವಕರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರವಾಗಿ ಶ್ರೀ ರಾಹುಲ್ ಗಾಂಧಿ ಅವರೊಂದಿಗೆ ನೀವು ಮಾತನಾಡಬಹುದಾಗಿದೆ.
ಈ ಐತಿಹಾಸಿಕ ಯಾತ್ರೆಯಲ್ಲಿ ನೀವು ನಮ್ಮೊಂದಿಗೆ ಹೆಜ್ಜೆ ಹಾಕಿ.
ಆಸಕ್ತಿಕರ ಸಂಗತಿಗಳು
- ಕಳೆದ ಒಂದು ವರ್ಷದಲ್ಲಿ, ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ಇಲಾಖೆಗಳಾದ್ಯಂತ 7.7 ಲಕ್ಷ ಹುದ್ದೆಗಳಲ್ಲಿ 2.4 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಮತ್ತು ಅವುಗಳನ್ನು ಭರ್ತಿ ಮಾಡಲು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ.
- ಏಪ್ರಿಲ್ 2022 ವರೆಗೆ ಕರ್ನಾಟಕದಲ್ಲಿ ಮಹಿಳಾ ನಿರುದ್ಯೋಗ ದರವು 7.7% ರಷ್ಟಾಗಿತ್ತು
- ಕರ್ನಾಟಕದಲ್ಲಿ ಸಹಾಯಕ ಕೃಷಿ ಅಧಿಕಾರಿಗಳ 2,099 ಹುದ್ದೆಗಳ ಪೈಕಿ 400 ಮಾತ್ರ ಭರ್ತಿಯಾಗಿದೆ ಮತ್ತು ಪ್ರತಿಯೊಬ್ಬ ಅಧಿಕಾರಿಯನ್ನು ಎರಡರಿಂದ ಮೂರು ಗ್ರಾಮ ಪಂಚಾಯಿತಿ ಜವಾಬ್ದಾರಿ ನೀಡಲಾಗಿತ್ತು.
- ಕರ್ನಾಟಕದಲ್ಲಿ ಕಳೆದ ವರ್ಷ ಕೃಷಿ ವಲಯದಲ್ಲಿ ಆತ್ಮಹತ್ಯೆ ಪ್ರಮಾಣ 19.9% ಆಗಿತ್ತು.
- ಪಿಎಸ್ಐ ಹಗರಣದ ನಂತರ, ಕೆಪಿಟಿಸಿಎಲ್, ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಗರಣಗಳು ಬೆಳಕಿಗೆ ಬಂದಿದ್ದವು.
- 2021 ರಲ್ಲಿ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಲ್ಲಿ ನಿರುದ್ಯೋಗ ದರವು 19.4% ಆಗಿತ್ತು.